ನೆಪೋಲಿಯನ್ 2 -
	1812-1832. ಫ್ರಾನ್ಸನ್ನಾಳಿದ ಒಂದನೆಯ ನೆಪೋಲಿಯನ್ನನ ಮಗ. ತಾಯಿ ಮೇರಿ ಲೂಯಿಸ್ó. ರೋಮಿನ ದೊರೆ (1811-14). ಪರ್ಮಾ ರಾಜಕುಮಾರ (1814-18), ರೀಷ್ಟಾಡಿನ್ ಡ್ಯೂಕ್ (1818-32) ಎಂಬ ಬಿರುದುಗಳು ಈತನಿಗಿದ್ದುವು. 1815ರಲ್ಲಿ 1ನೆಯ ನೆಪೋಲಿಯನ್ ಇವನಿಗಾಗಿ ಅಧಿಕಾರ ತ್ಯಾಗ ಮಾಡಿದ. ಆದರೆ ಇವನು ಆಳ್ವಿಕೆ ನಡೆಸಲಿಲ್ಲ. ವಿಯೆನ್ನದಲ್ಲಿ ಬಂಧನ ಸ್ಥಿತಿಯಲ್ಲಿ ಕಾಲ ಕಳೆದ. ಕ್ಷಯರೋಗದಿಂದ ಅಲ್ಲೇ ತೀರಿಕೊಂಡ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ